Baryada Muynada Song lyrics - Supurthi

ಬರೆಯದ ಮೌನದ ಕವಿತೆ

. ಚಿತ್ರಗೀತೆ | ಸ್ಪರ್ಶ

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ
ಭಾವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನಸ ಪುಟದೀ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ
ಯಾವ ಹೂವು ಯಾರ ಮುಡಿಗೊ ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ

*** Kannada Song Lyrics***

No comments:

Post a Comment