Hesaru Purthi Song lyrics

ಹೆಸರು ಪೂರ್ತಿ ಹೇಳದೇ, ಪರಮಾತ್ಮ (2011)

ಚಿತ್ರ: ಪರಮಾತ್ಮ (2011), ಹಾಡು:ಹೆಸರು ಪೂರ್ತಿ ಹೇಳದೇ, ಸಂಗೀತ: ವೀ ಹರಿಕೃಷ್ಣ, ಗಾಯನ: ವಾಣಿ ಹರಿಕೃಷ್ಣ , ಸಾಹಿತ್ಯ: ಯೋಗರಾಜ್ ಭಟ್ಟ್

ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..
ನಗುತಿದೆ ನದಿ ಇದು ಯಾಕೆ.. ನೋಡುತ ನನ್ನನ್ನು...
ಹೃದಯವ ಹೆದರಲೇಬೇಕೆ... ಬಯಸಲು ನಿನ್ನನ್ನು...

ಹೆಸರು ಪೂರ್ತಿ ಹೇಳದೇ... ತುಟಿಯ ಕಚ್ಚಿಕೊಳ್ಳಲೇ...
ಹರೆಯ ಏನೋ ಹೇಳಿದೆ.. ಹಣೆಯ ಚಚ್ಚಿಕೊಳ್ಳಲೇ...
ಮನಸು ತುಂಬಾ ಮಾಗಿದೆ.. ಕೊಟ್ಟುಬಿಡಲೇ..

ಎಳೆಬಿಸಿಲ ಸಂಕೋಚವು... ನೀ ನಗಲು, ಮೈತಾಕಿದೆ..
ನನ ಬೆನ್ನು ನಾಚುತಿದು... ನೋಡುತಿರಲು, ನೀ... ನನ್ನಕಡೆಗೆ..

ಬಯಕೆ ಬಂದು ನಿಂತಿದೆ.. ಉಗುರು ಕಚ್ಚಿಕೊಳ್ಳಲೇ..
ಬೇರೆ ಏನೋ ಕೇಳದೇ... ತುಂಬಾ, ಹಚ್ಚಿಕೊಳ್ಳಲೇ...
ಹೇಳದಂತಹ ಮಾತಿದೆ.. ಮುಚ್ಚಿ..ಇಡಲೇ

ನಿನ ತುಂಟ ಕಣ್ಣಲ್ಲಿದೆ... ಮಡಚಿಟ್ಟ ಆಕಾಶವು..
ಬಿಳಿ ಹೂವಿನ ಮೌನವು, ನನ್ನೆದೆಯಲಿ... ನಾ... ಏನ್ ಏನ್ನಲಿ..
ತುಂಬಾ ಮುತ್ತು ಬಂದಿದೆ.. ಒಮ್ಮೆ ದೃಷ್ಟಿತೆಗೆಯಲೇ...
ನನಗೆ ಬುದ್ಧಿ ಎಲ್ಲಿದೆ... ಒಮ್ಮೆ, ಕಚ್ಚಿನೂಡಲೇ...
ನಿನ್ನ ತೊಳು ನನ್ನದೇ... ಇದ್ದುಬಿಡಲೇ....


*** Kannada  song Lyrics ***

1 comment: