Hurdaya jaridi Song Lyrics - Lifue Istene

ಹೃದಯ ಜಾರುತಿದೆ, ಲೈಫು ಇಷ್ಟೇನೇ (2011)

ಚಿತ್ರ: ಲೈಫು ಇಷ್ಟೇನೇ (2011), ಹಾಡು: ಹೃದಯ ಜಾರುತಿದೆ , ಸಂಗೀತ: ಮನೋ ಮೂರ್ತಿ, ಹಾಡಿದವರು: ರೇಂಜು, ಅಂಕಿತ ಪೈ, ಸಾಹಿತ್ಯ: ಯೋಗರಾಜ್ ಭಟ್ಟ್


ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು ನನ್ನೇ ಹಿಂಬಾಲಿಸು...
ಬಯಕೆ ಹೂವೊಂದು ಕಣ್ಣಲ್ಲಿ ನಗಲು ಬೇರೆ ಏನು ಹೇಳಲಿ ಇಂದು ನಾ..
ಮುಗಿಸು ಮೌನವನು ಸಹನೆ ಮರೆತು ತುಟಿಯ ದಾಟಳಿ ಮೊದಲ ಸ್ಪಂದನ..
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…

ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...

*** Kannada Song Lyrics***

No comments:

Post a Comment