Kachana Ganaga Song Lyrics

ಕಾಂಚನ ಗಂಗಾ(2004) - ಸೂರ್ಯನ ಕಿರಣ

ಸಂಗೀತ: ಎಸ್. ಎ. ರಾಜ್ಕುಮಾರ್
ಗಾಯನ: ಸೋನು ನಿಗಮ್, ವೈಶಾಲಿ

ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
ಕಾಂಚನ ಗಂಗಾ ಏರಲಿ ಪ್ರೀತಿ
ಚಂದ್ರ ಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗು ಕೊನೆವರೆಗು ಪ್ರೀತೀನು ಉಳಿಸಿಕೊಳ್ಳುವೆ
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೇ ಹೃದಯವು ಅರಳಿತು
ಸೂರ್ಯನ ಕಿರಣ ಚುಂಬಿಸಿ ತಾನೇ ತಾವರೆ ಅರಳಿತು

ಯಾರಿಗು ಕಾಣದ ಪ್ರೀತಿ ಇದು ಜೋಗದ ನೀರಿನ ರೀತಿಯಿದು
ಎದೆಯಲಿ ಝುಳು ಝುಳು ಅಂತ ಪುಳಕ ತಂದಿದೆ
ನೆನ್ನೆವರೆಗು ನೀನ್ಯಾರು ಮೊನ್ನೆವರೆಗು ನಾನ್ಯಾರು
ಕಣ್ಣಲ್ಲಿ ಕಟ್ಟಿಬಿಟ್ಟೆ ಪ್ರೀತಿ ಸೇತುವೆ
ಕಲ್ಲಂತ ಮನಸು ಕರಗೊಯ್ತು ಇಂದು ಕನಸಲ್ಲು ಕೂಡ ಹೊಸತು ಇದು
ಕನಸಲ್ಲು ನಿನ್ನ ನಾ ಮರೆಯಲಾರೆ ನಮ್ಮಿಬ್ಬರೆದೆಯು ಬೇರಾಗದು
ಜನುಮಕ್ಕು ಜನುಮಕ್ಕು ನಮ್ಮ ಜೀವನ
ಅರಳುವುದು ಬೆಳಗುವುದು ಎಂಥ ಬಂದನ

ಪ್ರೀತಿಯೆ ದೈವದ ಸಂಕೇತ ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿರಿಸಿರಲ್ಲು ಪ್ರೀತಿ ಆಶ್ರಯ
ಪ್ರೀತಿಯು ಒಂದು ಕನ್ನಡಿಯು ಮನಸನು ಬಿಂಬಿಸೋ ಮುನ್ನಿಡಿಯು
ಬೆರೆಯುವ ಚಣ ಚಣದಲ್ಲು ಏನೋ ವಿಸ್ಮಯ
ನೀ ಕಟ್ಟಿ ಕೊಡುವ ನೂರಾಸೆಗಾಗಿ ನಾ ಹುಟ್ಟಿ ಬರುವೆ ಜೊತೆ ಜೊತೆಯಲಿ
ಈ ಸೃಷ್ಟಿಯೊಳಗೆ ಎನೇನೆ ಇರಲಿ ನೀ ಮಾತ್ರ ಇರುವೆ ನನ್ನೆದೆಯಲಿ
ಪ್ರಕೃತಿಯೆ ಪ್ರಕೃತಿಯೆ ನೆಡೆಸು ನಮ್ಮನ್ನು, ಪ್ರೀತಿಸು ಈ ಜೀವಗಳ ನಾಳೆಗಳನ್ನು


*** Kannada Song Lyrics ***

No comments:

Post a Comment