ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(1980) - ಮಸುಕಾದ ಮನಸಿನ ಆಕಾಸಕೆ
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಿ
ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ.ಎ.ಎ.ಎ
ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನಾಂಗೆ ನೀ ಬಂದೆ
ಮಸುಕಾದ ಮನಸಿನ ಆಕಾಸಕೆ.ಎ.ಎ.ಎ
ಬಿರಿದು ನಿಂತ ಭೂಮಿಗೆ ಭರಣಿ ಮಳೆ ಬಂದ್ ಹಾಂಗೆ
ಬರಿದಾದ ಹೃದಯಕೆ ಪ್ರೀತಿ ಗಂಗೆ ನಾ ತರುವೆ
ಎಂದೆಂದು ನೊಂದು ಬೆಂದ ಬಾಳಿನಾಗೆ
ಎಂದೆಂದು ನೊಂದು ಬೆಂದ ಬಾಳಿನಾಗೆ
ಸೊಂಪು ನೀಡಿ ಜೀವಕ್ಕೆ ತಂಪು ತಂದು ಕೊಡುವೀ ಏ.ಎ.ಎ.ಎ
ಮಸುಕಾದ ಮನಸಿನ ಆಕಾಸಕೆ.ಎ.ಎ.ಎ
ಬಂಜಾರದ ಹೊಲದಾಗೆ ತುಂಭೆ ಹೂ ಅರಳಿದಾಂಗೆ
ನೋವನುಂಡ ಒಡಲಿಗೆ ಜಾಜಿ ತಂಪು ಬೀರುವೆ
ಹಾಳಾಗಿ ಬೀಳು ಬಿದ್ದ ತೋಟದಾಗೆ
ಹಾಳಾಗಿ ಬೀಳು ಬಿದ್ದ ತೋಟದಾಗೆ
ಎಳೆಯ ಬಾಳೆ ಮೂಡೋ ಹಾಂಗೆ ಆಸೆ ನೀಡುವೇ ನಾ..ಆ..ಆ
ಮಸುಕಾದ ಮನಸಿನ ಆಕಾಸಕೆ.ಎ.ಎ.ಎ
ಯಾರು ಏನೇ ಅಂದರು ಕಾಡಾನೆ ನಡೆದ್ ಹಾಂಗೆ
ಬದುಕಿನ ಹಾದಿಯಾಗೆ ಹೆದರ್ಧಾಂಗೆ ನಡೆವೆ
ಯಾವತ್ತು ಜೊತೆ ಬಿಟ್ಟು ಹೋಗದ್ ಹಾಂಗೆ
ಯಾವತ್ತು ಜೊತೆ ಬಿಟ್ಟು ಹೋಗದ್ ಹಾಂಗೆ
ಪುಟ್ಟಂಪುಳ್ಳೆ ಅಂಟ್ಕೊಂಢಂಗೆ ಅಂಟಿಕೊಳ್ಳುವೇ ನಾ..ಆ.ಆ.ಆ
ಮಸುಕಾದ ಮನಸಿನ ಆಕಾಸಕೆ
ಮಿಂಚುವ ಚುಕ್ಕಿಯಂಗೆ ನಾ ಬಂದೆ
ತುಂಬಿ ಬಂದ ಹರೆಯದ ಅಂಗಳದಾಗೆ
ತಿಂಗಳ ಬೆಳಕಿನಾಂಗೆ ನೀ ಬಂದೆ
ಮಸುಕಾದ ಮನಸಿನ ಆಕಾಸಕೆ.ಎ.ಎ.ಎ
*** Kannda Song Lyrics ***
everybody knows these have been copied from kannadalyrics.com
ReplyDelete