Agegdu Oogedtha Song Lyrics

ಹೇಗಿದ್ದು ಹೇಗಾದೆಯೊ ಆತ್ಮ - ಕನಕದಾ

ಹೇಗಿದ್ದು ಹೇಗಾದೆಯೊ ಆತ್ಮ ಹೇಗಿದ್ದು ಹೇಗಾದೆಯೋ
ಯೋಗೀಶನ್ನಾನಂದಪುರದಲ್ಲಿರುವುದ ಬಿಟ್ಟು

ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು ಗುಸುಗಾಡಿ ನುಡಿದು ನೆಲ ಬಟ್ಟೆ ಬಿಡಿದು
ಕಿಸುಕದರಿವೆಯ ಪೊದ್ದು ಮಲ ಮೂತ್ರದಲಿ ಬಿದ್ದು ವಸುಧೆಯಲಿ ದಿನಗಳೆದೆಯೋ ಆತ್ಮ

ಎಳಗೆರೆಯಲಾಡಿ ಯವ್ವನದ ಊರಿಗೆ ಬಂದು ತಳ ತಳಿಪ ಹಸ್ತಾದ್ರಿ ನೆಳಲ ಸೇರಿ
ಅಳಲುಸುತ ಬೆಳೆದು ದಾರಿದ್ರ್ಯ ಬೇಟೆಗೆ ಬಂದು ಹಳೆಯ ಬೀಡಿಗೆ ಪಯಣವೋ ಅತ್ಮ

ಗನ್ನಕತಕದ ಮಾತು ಇನ್ನು ನಿನಗೇತಕೊ ಮುನ್ನ ಮಾಡಿದ ಕರ್ಮ ಬರದೊಡಲಿದೆ
ಉನ್ನತದ ಕಾಗಿನೆಲೆ ಆದಿಕೇಶವ ಸುಪ್ರಸನ್ನ ಮೂರುತಿಯನ್ನು ಭಜಿಸಲೋ ಆತ್ಮ


*** Kannda Vachan  Song Lyrics ***

No comments:

Post a Comment