Kaveri godavri Song Lyrics

ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ - ಸಾ.ಶಿ.ಮರುಳಯ್ಯಾ

ಕಾವೇರಿ ಗೋದಾವರಿ ಗಂಗೆ ಯಮುನೆ ಸಿಂಧುವೆ
ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಬೋಧ ಚಂದ್ರೋದಯ ರಾಗಾರುಣ ಜಾಲೆ
ಗಿರಿ ಸಿರಿ ವನ ಸಂಚಾರಿಣಿ ತುಂಗಾ ಜಲ ನೀಲೆ
ಕಲ ಕಲ ಕಲ ಮೆದುಹಾಸಲಿ ಗಾನ ಸುಪ್ತ ಲೋಲೆ

ಮಲೆನಾಡಿನ ಕೋಗಿಲೆಯೆ ಬಯಲುನಾಡ ಮಲ್ಲಿಗೆಯೆ
ವನ್ಯ ವಿಷಯ ಭೃಂಗವೆ ಧವಳ ಗಿರಿಯ ಶೃಂಗವೆ
ನಸು ನಸುರಿನ ಹಿಮ ಮಣಿಯೆ ಎಳೆ ಬಿಸಿಲಿನ ಮೇಲುದವೆ
ಬಿರಿದ ಮುಗುಳ ಬಿಂಕವೆ ತೆರೆದ ಸೋಗೆ ನರ್ತನವೆ
ನಿರ್ಭರಾ ನಿರ್ಜರಣಿಯ ಜಲಪಾತದ ಗಿರಿಗರ್ಜನೆಯೆ

*** Kannada Song Lyrics ***

No comments:

Post a Comment