Kanasu Edu Nanasu Edu Song Lyrics - Chelvena Chittara

ಕನಸೋ ಇದು ನನಸೋ ಇದು .........

ಚಿತ್ರ: ಚೆಲುವಿನ ಚಿತ್ತಾರ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್, ಸುನಿಧಿ ಚೌಹಾನ್


ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವಾ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ನೀ ಹುಟ್ಟೊದೆಲ್ಲಿ ನಿನ್ನ ಆ ತವರೂರೆಲ್ಲಿ
ನಿನ್ಗೆ ತಾಯ್ತಂದೆ ಯಾರು ನೀ ಹೇಳೆಯಾ
ನಿನಗಿಂತಲು ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿನಗಿಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖಸಾಗರ

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲ್ಲಿ ನೀ ನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ

ಪ್ರೀತಿ ಈ ಹೃದಯಗಳನ್ನು ನೀನು ಆವರಸಿಕೊಂಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರೂ ಮತಿಹೀನರು
ನಿನ್ನ ಮುಷ್ಟಿಗೆ ಇಲ್ಲಿ ಶರಣಾದರು
ಪ್ರೀತಿ ಈ ಸಂಯಮದಲ್ಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀನಿಲ್ಲವೇ
ನಿನಗಿಂತಲು ಹಿತಯಾವುದು
ನಿನ್ನಿಂದಲೇ ತಾನೆ ಜಗ ನಲಿವುದು

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ಅಂತರಂಗದ ಆಹ್ವಾನವೇ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವಾ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು

*** Kannada Song Lyrics***

No comments:

Post a Comment