ಒಂದೇ ಸಮನೆ ನಿಟ್ಟುಸಿರು....
ಚಿತ್ರ: ಗಾಳಿಪಟ
ಸಂಗೀತ: ವಿ ಹರಿಕೃಷ್ಣ
ಹಾಡಿದವರು: ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಲೆಬಿಲ್ಲಿನಂತೆ ನೋವು
ಗುರಿಯಿರದ ಏಕಾಂತವೆ ಒಲವೆ...
ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣಾ ಹನಿ ಸುಮ್ಮನೆ ಒಣಗಿ
ಅವಳನ್ನು ಜಪಿಸುವುದೇ ಒಲವೆ...
ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವಾ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೆ....
*** Kannada Song Lyrics***
---------------------------------------http://telugutrack.blogspot.com--------------------------------------- Telugu Music, Telugu Old Music, Telugu Middle Age music, Latest Releases, Latest Songs, Video Songs, Movies, Download Latest Songs, Rapidshare Links, Megashare Links, MegaUpload Links, Telugu Duets, Telugu Old Melodies, Telugu Romantic Songs, Telugu Patriotic, Telugu Devotional, Telugu Lyricists, Telugu Singers, Telugu Heros, Telugu Stars.
No comments:
Post a Comment