Udagu Oodada Song Lyrics

ಉಂಡು ಹೋದ ಕೊಂಡು ಹೋದ(1992) - ಬಂದಾನೊ ಬಂದಾನೊ ನಮ್ಮ ಕೃಷ್ಣಯ್ಯಾ

ಸಂಗೀತ: ವಿಜಯಭಾಸ್ಕರ್
ಗಾಯನ: ಬಿ.ಆರ್.ಛಾಯ, ಸಂಗಡಿಗರು

ಬಂದಾನೊ ಬಂದಾನೊ ಭಾಗ್ಯವ ತಂದಾನೊ ನಮ್ಮ ಕೃಷ್ಣಯ್ಯಾ

ಹಾಲು ನೀಡಿ ಬೆಣ್ಣೆ ನೀಡಿ ಸುಖ ಶಾಂತಿ ತಂದಾನಯ್ಯಾ ... ೨

ಅಂದು ಕೊಳಲ ಕರೆಗೆ ಗೋಕುಲದ ಹಸುಗಳು
ಇಂದು ನಿನ್ನ ಕರೆಗೆ ಕಮ್ಮಂಗಿಪುರದ ಜನಗಳು ... ೨

ಅಂದು ತನ್ನ ಬಾಯಲ್ಲೆ ಜಗವ ತೋರಿದ
ಇಂದು ಅಂಗೈ ಚಿತ್ರದಲ್ಲೆ ಸ್ವರ್ಗ ಬರೆಸಿದ

ಬಂದಾನೊ ಬಂದಾನೊ ಭಾಗ್ಯವ ತಂದಾನೊ ನಮ್ಮ ಕೃಷ್ಣಯ್ಯಾ
ಹೊಯ್ ಹಾಲು ನೀಡಿ ಬೆಣ್ಣೆ ನೀಡಿ
ಸುಖ ಶಾಂತಿ ತಂದಾನಯ್ಯಾ

ಆನೆ ಸೈಜಿನ್ ಹಸುಗಳು ಹಡಗಲ್ಲಿ ಬರ್ತಾವಂತೆ
ನಿಂಗಿಗಿಂತ ಬಲು ದಪ್ಪಾ ಹಸು ಕರುಗಳು ಇರ್ತಾವಂತೆ ... ೨

ಹಂಡೆ ತುಂಬಾ ಹಾಲಂತೆ ಮಡಕೆ ತುಂಬಾ ಮೊಸರಂತೆ
ತಿನ್ನೊವಷ್ಟು ತೇಗೊವಷ್ಟು ತುಪ್ಪಾ ಗಿಣ್ಣೂ ಬೆಣ್ಣೆಯಂತೆ

ಬಂದಾನೊ ಬಂದಾನೊ ನಮ್ಮ ಕೃಷ್ಣಯ್ಯಾ
ಹೊಯ್ ಹಾಲು ನೀಡಿ ಬೆಣ್ಣೆ ನೀಡಿ
ಸುಖ ಶಾಂತಿ ತಂದಾನಯ್ಯಾ

ನಮಗು ನಿಮಗು ಅವರಿಗು ಇವರಿಗು
ಜಗದ ಜನರಿಗೆಲ್ಲಾ ಕನಸುಗಳೆ ಆಸ್ತಿ ... ೨

ಕನಸು ಮಾರಿ ಬದುಕೊ ದಾರಿ
ಸಾಗಿಸುವ ಜನರಿಗೆ ಕಾದಿದೆ ಶಾಸ್ತಿ

ಬಂದಾನೊ ಬಂದಾನೊ ಭಾಗ್ಯವ ತಂದಾನೊ ನಮ್ಮ ಕೃಷ್ಣಯ್ಯಾ
ಹೊಯ್ ಹಾಲು ನೀಡಿ ಬೆಣ್ಣೆ ನೀಡಿ
ಸುಖ ಶಾಂತಿ ತಂದಾನಯ್ಯಾ

ಬಂದಾನೊ ಬಂದಾನೊ ಭಾಗ್ಯವ ತಂದಾನೊ ನಮ್ಮ ಕೃಷ್ಣಯ್ಯಾ
ಹೊಯ್ ಹಾಲು ನೀಡಿ ಬೆಣ್ಣೆ ನೀಡಿ
ಸುಖ ಶಾಂತಿ ತಂದಾನಯ್ಯಾ

ಬಂದಾನಯ್ಯ ತಂದಾನಯ್ಯ ಬಂದಾನಯ್ಯ ತಂದಾನಯ್ಯ

*** Kannada  Song Lyrics ***

No comments:

Post a Comment