ಹಣ್ಣು ಕೊಂಬುವ ಬನ್ನಿರಿ ಹರಿದಾಸರು - ಕನಕದಾಸ
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಚೆನ್ನ ಬಾಲಕೃಷ್ಣನೆಂಬ ಕನ್ನೆಗೊನೆ ಬಾಳೆಹಣ್ಣು
ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿ ಉಳ್ಳವರೆಲ್ಲಾ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು
ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜ ಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗ ವಂದಿತ ಪಾಲ್ಗಡಲೊಡೆಯನ ಹಣ್ಣು
ಸೃಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು
ತುರುವ ಕಾಯ್ದ ಹಣ್ಣು ಉರುಗನ ತುಳಿದ ಹಣ್ಣು
ಕರೆದರೆ ಕಂಬದೊಳು ಓ ಎಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುನಾಳು ಕಾಗಿನೆಲೆ ಆದಿಕೇಶವನ ಹಣ್ಣು
*** Kannada Song Lyrics ***
No comments:
Post a Comment