ಅಂಬಾರಿ(2009) - ಯಾರೇ ನೀ ದೇವತೆಯಾ
ಸಂಗೀತ: ವಿ. ಹರಿಕೃಷ್ಣ
ಗಾಯನ: ಚೇತನ್
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ
ಯಾರಿಗೆ ಹೇಳಲಿ ನಾ
ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಹಾಡೋ ಕೋಗಿಲೆಗೊಂದು
ಕೂಗೋ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ ನಿಂದೆ
ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯನಾ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ
ಘಳಿಗೆ ಕೆಳಗೆ ಹೊರ ಬಂದೇನೆ
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಸಾಯೋ ರಾತ್ರಿಗೆ ಮುನ್ನ
ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ
ಬಂದಾಗಲೆ ಕಣ್ಣೀರು ಸತ್ತಿತ್ತು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ನ್ ಹೆಸರೇನೇ
ಹೇಗ್ಹೇಳಲಿ ಹುಚ್ಚು ಈ ಪ್ರೀತಿಯಾ
ಏನಾದೆ ನಾನು ಏನಾದೆ ಎಲ್ಲಾ
ತಿಳಿಸೋಕೆ ಮುಂಚೆ ಹೀಗಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
*** Kannada Song Lyrics***