ಮದುವೆ ಮನೆ(೨೦೧೧) --- ಕಣ್ಣೆ ಕೂಡಿರುವಾಗ ನಿನ್ನನ್ನೇ ಕೂಗಿರುವಾಗ ವಿವರಣೆ ಬೇಕೇನೂ?
ಚಿತ್ರ: ಮದುವೆ ಮನೆ
ಸಂಗೀತ: ಮಣಿಕಾಂತ್ ಕದ್ರಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕ:ಕಾರ್ತಿಕ್
ಕಣ್ಣೆ ಕೂಡಿರುವಾಗ ನಿನ್ನನ್ನೇ ಕೂಗಿರುವಾಗ ವಿವರಣೆ ಬೇಕೇನೂ?
ಜೀವ ಸೋಕಿರುವಾಗ ನಿನ್ನತ್ತ ನೂಕಿರುವಾಗ ಪ್ರೇರಣೆ ಬೇರೇನೂ?
ಕಣ್ಣೆ ಕೂಡಿರುವಾಗ ನಿನ್ನನ್ನೇ ಕೂಗಿರುವಾಗ ವಿವರಣೆ ಬೇಕೇನೂ?
ಜೀವ ಸೋಕಿರುವಾಗ ನಿನ್ನತ್ತ ನೂಕಿರುವಾಗ ಪ್ರೇರಣೆ ಬೇರೇನೂ?
ಹರಿವಾ ನೀರಿನಲಿ ನಿನ್ನಾ ಹೃದಯಾ ತೇಲಿದೆ
ಅದರಾ ಮಾತುಗಳನೇ ಕೇಳು ನೀನೂ..
ನೀನೀಗಾ ಕಾತರದೀ ನೋಡು ನನ್ನನೂ...
ಹೀಗೇನೇ ಹಾತೊರೆದು ಕೇಳು ನನ್ನನೂ
ನಿನ್ನಲ್ಲೆ ನನ್ನನ್ನೇ ಕಂಡಂತೆ...
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ...
ಕಣ್ಣೆ ಕೂಡಿರುವಾಗ ನಿನ್ನನ್ನೇ ಕೂಗಿರುವಾಗ ವಿವರಣೆ ಬೇಕೇನೂ?
ಜೀವ ಸೋಕಿರುವಾಗ ನಿನ್ನತ್ತ ನೂಕಿರುವಾಗ ಪ್ರೇರಣೆ ಬೇರೇನೂ?
ಬಳಿ ಬಂದಿದೆ ಮೋಡದ ಸಾಲು ಹನಿಯಾಗುವ ಹಂಬಲ ಹಿಡಿದೂ
ಮಿಸುಕಾಡಿದೆ ಮಂಜಿನ ಶಾಲು ಮರೆಮಾಚುವ ಚಂದನ ಕಡಿದೂ
ನಿನ್ನಾ ಕನಸಿನ ಓಳಗೆಲ್ಲೋ ನಾ ಅಡಗಿರುವೇ
ಮೈಮರೆಸುವ ಮಾತಲ್ಲೇ ನೀ ತೊಡಗಿರುವೇ...
ನೀನಾಗೆ ಏನೆಲ್ಲಾ ಅಂದಂತೆ...
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ...
ಋತುಮಾನವೆ ಹೀಗಿರುವಾಗ ಸವಿಭಾವಕೆ ಎಲ್ಲಿದೆ ಕೊರತೆ
ಖುಷಿಯಿಂದಲೆ ಸಾಗಿದೆ ಈಗ ಕುಶಲೋಪರಿ ನಿನ್ನಯ ಕುರಿತೇ...
ನಿನ್ನಾ ಕರೆಯಲಿ ಏನಂತಾ ನಾ ಬರಿವರಿದೆ
ಈ ಹರೆಯಕೆ ಏನರ್ಥ ನೀ ಜೊತೆಗಿರದೇ...
ಹೀಗೆಲ್ಲಾ ಆಗುತ್ತಾ ಬಂದಂತೆ...
ಯಾರಿಲ್ಲಾ ಯಾರಿಲ್ಲಾ ನಿನ್ನಂತೆ...
ನೀನೀಗಾ ಕಾತರದೀ ನೋಡು ನನ್ನನೂ...
ಹೀಗೇನೇ ಹಾತೊರೆದು ಕೇಳು ನನ್ನನೂ
*** Kannada Song Lyrics***
No comments:
Post a Comment