ಒಂದಾಗಿ ಬಾಳು (1988) - ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ
ಸಂಗೀತ: ವಿಜಯಾನಂದ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಈ ಬಾಳಲಿ ನಿನ್ನ ಇದೇ ಸುಖಾ ನೀಡಿ
ಇದೇ ಹರುಷ ಸದಾ ಇರಲಿ
ಇದೇ ಹರುಷ ಸದಾ ಇರಲಿ
ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಚೈತ್ರದಲ್ಲಿ ಹಾಡುವಂತ ನೀನು ಒಂದು ಕೋಗಿಲೆ
ನಾನು ಬೆಂದು ಬಾಡುವಂತ ಸುಮವು ಎಂದು ಹೇಳಲೆ
ಹೂವಿನಂತ ಬಾಳಿನಲ್ಲಿ ಮುಳ್ಳಿನಂತೆ ಸೇರೆನು
ಯಾರ ಭಾಗ್ಯವನ್ನು ನಾನು ಎಂದು ದೋಚಲಾರೆನು
ಬಾಳು ನನ್ನದಾಗಿ ಇರಲು ಭಗ್ನವಾದ ಆಲಯ
ನಂಬಿ ಬಂದ ಶೋಕಕ್ಕೆಲ್ಲಾ ನಂದೀ ಹೃದಯ ಆಶ್ರಯ
ಇದೇ ಭಾವ ಮೂಡಿದಾಗ ಅದೇ ಲೋಕದೆ ಇದೇ ಪಾವನಾ
ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಜಾರಿದಂತ ಕಣ್ಣ ನೀರು ಮತ್ತೆ ಕಣ್ಣ ಸೇರದು
ದೂರಕ್ಕೆಲ್ಲೊ ಸಾಗಿದಂತ ಕ್ಷಣವು ಮರಳಿ ಬಾರದು
ಹೆಪ್ಪು ಹಾಕಿ ಫಲವು ಏನು ಒಡೆದು ಹೋದ ಹಾಲಿಗೆ
ಪ್ರೇಮ ಪಡೆವ ಹಕ್ಕೆ ಇಲ್ಲ ದೀನ ಜನರ ಪಾಲಿಗೆ
ನೆಲೆಯು ಎಲ್ಲೂ ಕಾಣದಂತ ಕಥೆಯು ನನ್ನದಾಗಿದೆ
ಬಲೆಯ ಬೀಸಿ ಕಾಯುತಿರುವ ಜಗವು ನನ್ನ ಕಾಡಿದೆ
ಅದೇ ಲೋಕ ರೀತಿ ಎನಲು ಇದೇ ಜೀವನಾ ಮಹಾ ವೇಧನಾ
ಪ್ರೇಮಾಂಜಲಿ ಇದೇ ನನ್ನ ಭಾಶ್ಪಾಂಜಲಿ ನೀಡು ಪುಶ್ಪಾಂಜಲಿ
ಈ ಬಾಳಲಿ ನಿನ್ನ ಇದೇ ಸುಖಾ ನೀಡಿ
ಇದೇ ಹರುಷ ಸದಾ ಇರಲಿ
ಇದೇ ಹರುಷ ಸದಾ ಇರಲಿ
*** Kannda Song Lyrics ***
No comments:
Post a Comment