---------------------------------------http://telugutrack.blogspot.com--------------------------------------- Telugu Music, Telugu Old Music, Telugu Middle Age music, Latest Releases, Latest Songs, Video Songs, Movies, Download Latest Songs, Rapidshare Links, Megashare Links, MegaUpload Links, Telugu Duets, Telugu Old Melodies, Telugu Romantic Songs, Telugu Patriotic, Telugu Devotional, Telugu Lyricists, Telugu Singers, Telugu Heros, Telugu Stars.
Hannu Kombava Song Lyrics - Kanakadasa
ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಚೆನ್ನ ಬಾಲಕೃಷ್ಣನೆಂಬ ಕನ್ನೆಗೊನೆ ಬಾಳೆಹಣ್ಣು
ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿ ಉಳ್ಳವರೆಲ್ಲಾ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು
ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜ ಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗ ವಂದಿತ ಪಾಲ್ಗಡಲೊಡೆಯನ ಹಣ್ಣು
ಸೃಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು
ತುರುವ ಕಾಯ್ದ ಹಣ್ಣು ಉರುಗನ ತುಳಿದ ಹಣ್ಣು
ಕರೆದರೆ ಕಂಬದೊಳು ಓ ಎಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುನಾಳು ಕಾಗಿನೆಲೆ ಆದಿಕೇಶವನ ಹಣ್ಣು
*** Kannada Song Lyrics ***
Omkar Song Lyrics
ಓಂಕಾರ(2004) - ಸೂಟು ಬೂಟು ಕಾರಿದ್ರೆ ಇದ್ರೆ.
ಸಂಗೀತ: ಗುರುಕಿರಣ್
ಗಾಯನ: ಗುರುಕಿರಣ್
ಸೂಟು ಬೂಟು ಕಾರಿದ್ರೆ ಇದ್ರೆ..
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೆ
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್ ಖಾಲಿ ಆದ್ರೆ ಗುಡ್ ಬಾಯ್ ಅಂತಾರೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೆ
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್ ಖಾಲಿ ಆದ್ರೆ ಗುಡ್ ಬಾಯ್ ಅಂತಾರೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಮಳ್ಳಿ ಮಳ್ಳಿ ಮೈ ಹೂವ ಬಳ್ಳಿ ಅಲ್ಲಲ್ಲಿ ಅಂಕು ಡೊಂಕು
ಒಂದು ಕ್ಯಾಟು ವಾಕು ಒಂದು ಕೆಟ್ಟ ಲುಕ್ಕು
ಕೊಟ್ಟ್ ಹಿಡಿಸುತಾಳೆ ಮಂಕು
ಆ ಕೆಂಪು ಕೆನ್ನೆ ಆ ಕಣ್ಣ ಸನ್ನೆಗೆ ಬಿದ್ರೆ ಗಾಡು ಕೇಸು
ಒಂದಿಷ್ಟು ದಾಡಿ ಮುಖದಲ್ಲಿ ಮೂಡಿ ಆಗ್ತಾರೆ ದೇವದಾಸು
ಅವರಿಬ್ರು ಆಗಲ್ಲ ಅವರಾದ್ರೂ ಲೈಫೆಲ್ಲ
ಹಂಗಿದ್ರು ನಮಗೆಲ್ಲಾ ನಾವ್ ಬುದ್ಧಿ ಕಲಿಯಲ್ಲ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೆ
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್ ಖಾಲಿ ಆದ್ರೆ ಗುಡ್ ಬಾಯ್ ಅಂತಾರೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಬಳುಕುತ್ತ ಬಂದ್ರೆ ಐ ಲವ್ ಯು ಅಂದ್ರೆ
ನಮಗ್ ಸ್ವರ್ಗ ಮೂರೇ ಗೇಣು
ಮಾತಲ್ಲಿ ಮುತ್ತು ನಂಬಿದರೆ ಕುತ್ತು
ನಾವ್ ಆಗಬೇಕು ನೇಟು
ಪಾರ್ಟಿಂದ ಪಾರ್ಟಿಗೆ ಹಾರೋ ಆಟಕೆ ಫೇಮಸ್ಸು ಪುಡಾರಿ
ಹಾರ್ಟಿಂದ ಹಾರ್ಟಿಗೆ ದೊಂಬರಾಟ ಆಡ್ತಾಳೆ ಈ ಟಪೋರಿ
ಇವಳ್ ನೋ ಅಂದ್ರೆ ಎಸ್ಸು ಪ್ಲಸ್ ಅಂದ್ರೆ ಮೈನಸ್ಸು
ಇವಳಾದ್ರೆ ಮಿಸ್ಸೆಸ್ಸು ಲೈಫೆಲ್ಲ ಸರ್ಕಸ್ಸು
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಸೂಟು ಬೂಟು ಕಾರಿದ್ರೆ ಹಾಯ್ ಹಾಯ್ ಅಂತಾರೆ
ಡೇಟು ಪಬ್ಬು ಅಂತಂದ್ರೆ ಎಂಜಾಯ್ ಮಾಡ್ತಾರೆ
ಒಂದು ವೇಳೆ ಜೇಬ್ ಖಾಲಿ ಆದ್ರೆ ಗುಡ್ ಬಾಯ್ ಅಂತಾರೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
ಈ ಹುಡ್ಗೀರೆಲ್ಲ ಹಿಂಗೆ ಈ ಹುಡ್ಗಿರೆಲ್ಲ ಹಿಂಗೆ
*** Kannada Song Lyrics***
Devadasu Song Lyrics
ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ವಾಣಿ ಜೈರಾಮ್, ಸಂಗಡಿಗರು
ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣಾ ಕೃಷ್ಣ ಎನ್ನಬಾರದೆ
ಶ್ರೀ ಕೃಷ್ಣ ಎನಬಾರದೆ
ಗಂಧವ ಪೂಸಿ ತಾಂಬುಲ ಮೆಲುವಾಗೊಮ್ಮೆ
ಕೃಷ್ಣ ಎನಬಾರದೆ
ತನ್ನ ಮಂಧ ಗಮನೆ ಕೂಡ ಸರಸವಾಡುತ್ತಲೊಮ್ಮೆ
ಕೃಷ್ಣ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತ್ತಲೊಮ್ಮೆ
ಕೃಷ್ಣ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತ್ತಲೊಮ್ಮೆ
ಕೃಷ್ಣ ಎನಬಾರದೆ
ಬಹು ಚೆಂದೊಳ್ಳೆ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ
ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ನರ ಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೆ
ದುರಿತ ರಾಶಿಗಳ ತರಿದು ಬಿಸಾಡುತಲೊಮ್ಮೆ
ಕೃಷ್ಣ ಎನಬಾರದೆ
ಸದಾ ಗರುಡ ವಾಹನ ಸಿರಿ ಪುರಂದರ ವಿಟ್ಠಲನ್ನೆ
ಕೃಷ್ಣ ಎನಬಾರದೆ
ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ
*** Kannada Song Lyrics ***