Kathala Kadega Song Lyrics - Parmathama

ಪರಮಾತ್ಮ

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ...
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರ್ಬಾರ್ದು ರೀ...

ಹೊಸ ಹುಡುಗಿ ಕೈ ಅಲ್ಲಿ ಕೆಂಪಾದ ಗೋರಂಟಿ
ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರೆಂಟಿ..
ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..

ಹುಡುಗೀರ ಮನಸಲ್ಲಿ ಏನೇನಿದೆ
ತಿಳ್ಕೊಲ್ಲೋ ತಾಕತ್ತು ನಮಗೆಲ್ಲಿದೆ
ಪ್ರಾಬ್ಲೆಮ್ಮು ಇರದ ಫೀಮೇಲು ಇಲ್ಲ...

ಸಿಕ್ಸರ್ರು ಹೊಡಿ ಬಹುದು ಬ್ಯಾಟ್ ಇಲ್ಲದೆ
ಪ್ರೀತ್ಸೋಕೆ ಆಗೋಲ್ಲ ಡೌಟ್ ಇಲ್ಲದೆ
ಅನುಮಾನ ಇರದ ಅನುರಾಗ ಇಲ್ಲ...

ಮಾಡ್ರನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್ ಪೋನು ಬಂದಮೇಲೆ ಹಿಂಗಾಯ್ತು ಸ್ವಾಮಿ
ಲವ್ ಅಲ್ಲಿ ಕಣ್ಣೀರು compulsory
ಯಾವ್ದಕ್ಕೂ ಕಿರ್ಚೀಫು ಇಟ್ಕೊಂಡಿರಿ..

ಯಾರಾನ ಕೈ ಕೊಟ್ಟರೆ ಪಾರ್ಟಿ ಕೊಡಿ
ನೆನಪನ್ನ ಸೋಪಾಕಿ ತೊಳ್ಕೊಂಡು ಬಿಡಿ
ಕಣ್ಣೀಗೆ ಸೋಪು ಹೋಗ್ಬಾರ್ದು ಕಣ್ರೀ..

ಟೈಮ್ ಇದ್ರೆ ಒಂದ್ಚೂರು ದುಖಾಪಡಿ
ಮೆಸ್ಸೇಜು ಬರಬಹುದು ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು ಕೊಡಬಾರದು ಕಣ್ರೀ...

ಬೆನ್ನಲ್ಲಿ ಹುಣ್ ಅಂತೆ ಆ ಫಸ್ಟ್ ಲವ್ವು
ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ
ಕೆರೆಯೋಕೆ ಹುಣ್ ಒಂದು ಇರಬೇಕು ರೀ....

*** Kannada Latest Song Lyrics***

No comments:

Post a Comment

LinkWithin

Related Posts with Thumbnails