ಹೆಣ್ಣಿನ ಸೌಭಾಗ್ಯ(1984) - ಅರಳಿರುವೆ ಹೂವಾಗಿ ನಾನು
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಎಸ್. ಜಾನಕಿ
ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು ... ೨
ಒಲವು ಮೂಡುತ ಚೆಲುವ ತೋರುತ
ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ
ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ
ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು
ಹೊಳೆಯುವ ನೋಟ
ಬಳುಕುವ ಮಾಟ
ಅಲೆಗಳ ಓಟ
ತೀರದ ಆಟ
ಮನಸಿನ ಭಾವ ಹೃದಯದ ಜೀವ
ಅರಿಯದ ಮೋಹ ತಂದಿದೆ ನೋವ
ತಂಗಾಳಿ ಹೂಬಳ್ಳಿ ತೀಡಿ
ನೀವು ನನ್ನಂದ ಹೇಗೆಂದು ಹೇಳಿ
ತಂಗಾಳಿ ಹೂಬಳ್ಳಿ ತೀಡಿ
ನೀವು ನನ್ನಂದ ಹೇಗೆಂದು ಹೇಳಿ
ತನು ತೇಲಾಡಿ ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ
ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು
ಮುಗಿಲಿನ ಬಣ್ಣ ನವಿಲಿನ ಕಣ್ಣ
ಚಿಲಿಪಿಲಿ ಗಾನಾ ಕೂಡಿದೆ ನನ್ನ
ಕನಸಿನ ಆಸೆ ಕಲರವ ಭಾಷೆ
ಮಿಡಿದಿದೆ ನನ್ನ ತೋಳಿನ ಗೀತೆ
ಬಾನಾಡಿ ಬಾನಲ್ಲಿ ತೇಲಿ
ಬಂದು ನನ್ನಂದ ಹೇಗೆಂದು ಹೇಳಿ
ತನು ತೇಲಾಡಿ ತನು ತೇಲಾಡಿ ಮೀಯುತಲಿ ಮಾಗಿದೆ
ಮನ ಹಾರಾಡಿ ಬೀಗುತಲಿ ಹಾಡಿದೆ
ಅರಳಿರುವೆ ಹೂವಾಗಿ ನಾನು
ತನು ಮನ ಸವಿಯಾದ ಜೇನು
*** Kannda Old Song Lyrics ***
No comments:
Post a Comment