ಸಂಗ್ಯಾ ಬಾಳ್ಯಾ(1992) - ಗೆಣೆತಾನ ಗಮ್ಮತ್ತ್
ಸಂಗೀತ: ವಿಜಯಭಾಸ್ಕರ್
ಗೆಣೆತನ ಗಮ್ಮತ್ತ್ ಹಿಂಗ ಐತಂತ
ತಿಳಿಯೊದಿಲ್ಲಾ ತಮ್ಮಾ ಸರಳ
ಹೌದೇನ
ಹೇ ಗೆಣೆತನ ಗಮ್ಮತ್ತ್ ಹಿಂಗ ಐತಂತ
ತಿಳಿಯೊದಿಲ್ಲಾ ತಮ್ಮಾ ಸರಳ
ತಳ ಅಂಬುದು ಸಿಗುವುದಿಲ್ಲಾ
ಬಗ್ದಷ್ಟು ಐತಿ ಕೇಳಿದರಾಳ
ಗೀಯ ಗಾ ಗಾಗಿಯ ಗಾ ಗೀ
ಹೇ ತಳ ಅಂಬುದು ಸಿಗವುದಿಲ್ಲಾ
ಬಗ್ದಷ್ಟು ಐತಿ ಕೇಳಿದರಾಳ
ಗೀಯ ಗಾ ಗಾಗಿಯ ಗಾ ಗೀ
ತುದಿಗಾಲ ಮ್ಯಾಲ್ ನಿಂತ
ಇದ ಬೇಕ್ ಅಂತ್ ಹೇಳಿದ್ರ್ ಸಾಕು ಗೆಣೆತಾನಕ್ಕ್
ಹೇಂಗಪ್ಪಾ
ಹೇ ತುದಿಗಾಲ ಮ್ಯಾಲ್ ನಿಂತ
ಇದ ಬೇಕ್ ಅಂತ್ ಹೇಳಿದ್ರ್ ಸಾಕು ಗೆಣೆತಾನಕ್ಕ್
ಏಳ್ ಸಮುದ್ರ ದಾಟೆ ಇದ್ದರು
ಬಂದ್ ಸೇರತೈತಿ ನಿನ ತನಕ
ಗೀಯ ಗಾ ಗಾಗಿಯ ಗಾ ಗೀ
ಹೇ ಏಳ್ ಸಮುದ್ರ ದಾಟೆ ಇದ್ದರು
ಬಂದ್ ಸೇರತೈತಿ ನಿನ ತನಕ
ಗೀಯ ಗಾ ಗಾಗಿಯ ಗಾ ಗೀ
ಜಾತಿ ಗೋತ್ರ ಕುಲ ಕೇಳೊ ಮಾತೆ ಇಲ್ಲಾ ಏಕತ್ರ ಎಲ್ಲಾ ಇದ್ರವೊಳಗ
ಅದ್ ಹೇಂಗ
ಹೇ ಜಾತಿ ಗೋತ್ರ ಕುಲ ಕೇಳೊ ಮಾತೆ ಇಲ್ಲಾ ಏಕತ್ರ ಎಲ್ಲಾ ಇದ್ರವೊಳಗ
ಬಡವ ಬಲ್ಲಿದ ಯಾರ ಕೇಳತಾರ
ಪ್ರೀತಿ ಎಂಬುದೈತಿದರೊಳಗ
ಗೀಯ ಗಾ ಗಾಗಿಯ ಗಾ ಗೀ
ಹೇ ಬಡವ ಬಲ್ಲಿದ ಯಾರ ಕೇಳತಾರ
ಪ್ರೀತಿ ಎಂಬುದೈತಿದರೊಳಗ
ಗೀಯ ಗಾ ಗಾಗಿಯ ಗಾ ಗೀ
ಕೊಡತತ್ತ್ ಕೊಳುದ್ ನಡದ್ ಇದ್ದರು ವ್ಯಾಪಾರ ಅಲ್ಲಿದು ಗೆಣೆತಾನ
ಹೇಂಗಪ್ಪಾ
ಹೇ ಕೊಡ್ತತ್ತ್ ಕೊಳುದ್ ನಡದ್ ಇದ್ದರು ವ್ಯಾಪರ ಅಲ್ಲಿದು ಗೆಣೆತಾನ
ಗೆಣೆತಾನ ಕೆಚ್ಚಲಕ್ಕ್ ಬರ ಅಂಬುದಿಲ್ಲಾ
ಒಂದಕ್ಕಿರುವುದೊಂದರ ಧ್ಯಾನ
ಗೀಯ ಗಾ ಗಾಗಿಯ ಗಾ ಗೀ
ಹೇ ಗೆಣೆತಾನ ಕೆಚ್ಚಲಕ್ಕ್ ಬರ ಅಂಬುದಿಲ್ಲಾ
ಒಂದಕ್ಕಿರುವುದೊಂದರ ಧ್ಯಾನ
ಹಾಲ್ನಾಗ ಸಕ್ರಿ ಕುಡಿ ಸಿಮಿ ಏನೋ ಆಗ್ತೈತಿ
ಕುಡಿದು ಕಣ್ಣಿಗೆ ಕಾಣುವುದಿಲ್ಲಾ
ಹಿಂಗೇನಾ
ಹೇ ಹಾಲ್ನಾಗ ಸಕ್ರಿ ಕುಡಿ ಸಿಮಿ ಏನೋ ಆಗ್ತೈತಿ
ಕುಡಿದು ಕಣ್ಣಿಗೆ ಕಾಣುವುದಿಲ್ಲಾ
ಗೆಣೆತಾನ ಮನಸೆರಡು ಬೆಸದಿರು ತಿಳುವಳ್ಕಿ
ಬರುತೈತಿ ಅದು ಅನುಭವ ಮ್ಯಾಲ
ಗೀಯ ಗಾ ಗಾಗಿಯ ಗಾ ಗೀ
ಹೇ ಗೆಣೆತಾನ ಮನಸೆರಡು ಬೆಸದಿರು ತಿಳುವಳ್ಕಿ
ಬರುತೈತಿ ಅದು ಅನುಭವ ಮ್ಯಾಲ
ಗೀಯ ಗಾ ಗಾಗಿಯ ಗಾ ಗೀ
*** Kannada Old Song Lyrics ***
No comments:
Post a Comment