Devadasu Song Lyrics

ದೇವದಾಸಿ(1978) - ಕೃಷ್ಣ ಎನಬಾರದೆ

ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ವಾಣಿ ಜೈರಾಮ್, ಸಂಗಡಿಗರು


ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣಾ ಕೃಷ್ಣ ಎನ್ನಬಾರದೆ
ಶ್ರೀ ಕೃಷ್ಣ ಎನಬಾರದೆ

ಗಂಧವ ಪೂಸಿ ತಾಂಬುಲ ಮೆಲುವಾಗೊಮ್ಮೆ
ಕೃಷ್ಣ ಎನಬಾರದೆ

ತನ್ನ ಮಂಧ ಗಮನೆ ಕೂಡ ಸರಸವಾಡುತ್ತಲೊಮ್ಮೆ
ಕೃಷ್ಣ ಎನಬಾರದೆ

ಕಂದನ ಬಿಗಿದಪ್ಪಿ ಮುದ್ದಾಡುತ್ತಲೊಮ್ಮೆ
ಕೃಷ್ಣ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತ್ತಲೊಮ್ಮೆ
ಕೃಷ್ಣ ಎನಬಾರದೆ

ಬಹು ಚೆಂದೊಳ್ಳೆ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ

ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ನರ ಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೆ

ದುರಿತ ರಾಶಿಗಳ ತರಿದು ಬಿಸಾಡುತಲೊಮ್ಮೆ
ಕೃಷ್ಣ ಎನಬಾರದೆ

ಸದಾ ಗರುಡ ವಾಹನ ಸಿರಿ ಪುರಂದರ ವಿಟ್ಠಲನ್ನೆ
ಕೃಷ್ಣ ಎನಬಾರದೆ

ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣಾ ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ

ಕೃಷ್ಣ ಕೃಷ್ಣ ಜೈ ಜೈ ಕೃಷ್ಣ
ಕೃಷ್ಣ ಕೃಷ್ಣ ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಜೈ ಜೈ ಕೃಷ್ಣ
ಶ್ರೀ ಹರಿ ಕೃಷ್ಣ
ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ

*** Kannada Song Lyrics ***

No comments:

Post a Comment

LinkWithin

Related Posts with Thumbnails