America America Song Lyrics

ಜರಾಸಂಧ(೨೦೧೧) ---ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...

ಚಿತ್ರ: ಜರಾಸಂಧ
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕ:ಸೋನು ನಿಗಮ್, ಅನುರಾಧ ಭಟ್

ಓ... ಓ... ಓ...
ಓ... ಓ... ಓ...

ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ಗೆಳತಿಯರಾ ಜೊತೆ ಹೋಗದೇ...ಪರಿಚಿತರಾ ಬಳಿ ಕೂರದೇ...
ನನ್ನನಷ್ಟೇ... ಸಾಯೋ ಹಾಗೆ ನೀನು ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ

ನಗುವೆಲ್ಲ ನನಗಾಗಿ ಕೂಡಿ ಹಾಕೂ...ಮುನಿಸನ್ನು ಬರದಂತೆ ದೂರ ನೂಕೂ..
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ...ಗುಟ್ಟುಗಳ ನನ್ನೆದುರೇ ತೆರಿಯಾ ಬೇಕೂ..
ಎನನ್ನೋ ಹುಡುಕುವ ಘಳಿಗೆ ನನ್ನ ನಗುವೇ ನಿನಗೆ ಸಿಗಲೀ
ಯಾರನ್ನೋ ಕರಿಯುವ ಕ್ಷಣದೀ ನನ್ನ ಹೆಸರೇ ಮೊದಲೂ ಬರಲೀ...
ಬೇರೆಯೇನೂ ಯೋಚಿಸದೆ ನನ್ನ ಪ್ರೀತಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು

ಹೋ...ಹೋ...ಹೋ...
ಹೋ...ಹೋ...ಹೋ...

ಓ... ಓ... ಓ...
ಓ... ಓ... ಓ...
ನೀ ಹೇಳುವಾ ನಾ ಕೇಳುವಾ ಮಾತು ಒಂದೇ ಆಗಲಿ
ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ
ನೀ ಸೋತರೂ ನಾ ಸೋತರೂ ಪ್ರೀತಿ ಎಂದೂ ಗೆಲ್ಲಲೀ
ನೀನೆನ್ನುವಾ ನಾನೆನ್ನುವಾ ಮಾತಿನ್ನೆಲ್ಲಿ
ನೆರಳಾಗಿ ಹಗಲ್ಲೆಲ್ಲಾ ನೀನು ಬೇಕೂ...ಕನಸಾಗಿ ಇರುಳೆಲ್ಲಾ ಕಾಡ ಬೇಕೂ...
ಬದುಕಲ್ಲಿ ಗುರಿಯಂತೆ ನನ್ನ ಸೇರೀ...ಅನುರಾಗ ಅನುಗಾಲ ನೀಡು ಸಾಕೂ...
ಮುಂಜಾನೆ ಬೆಳಕಲಿ ಸ್ಮರಿಸು ಸರಿರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ ಮನಸ್ಸಲ್ಲಿ ನನ್ನನೆ ನೆನಸು
ದೇವರನ್ನೂ... ಬೇಡುವಾಗ ನನ್ನ ಜಪಿಸೂ...
ನಿನ್ನ ಎಲ್ಲಾ... ಅಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರಾ ಜೊತೆ ಸೇರದೇ...ಅವರಿವರಾ ನುಡಿ ಕೇಳದೇ...
ಓ... ಓ... ಓ...
ಓ... ಓ... ಓ...

*** Kannada Song Lyrics***

No comments:

Post a Comment

LinkWithin

Related Posts with Thumbnails