Idu Gokarrna Song Lyrics

ಇದು ಗೋಕರ್ಣದ ಪುರಾಣ ಕಥನ

ಇದು ಗೋಕರ್ಣದ ಪುರಾಣ ಕಥನ
ಆಲಿಸೆ ಜೀವನ ಪಾವನ
ಮಹಾಬಲೇಶ್ವರ ನೆಲಸಿದ ನಾಡಿನ
ಅಪೂರ್ವ ಚರಿತೆಯು ಅಮೃತ ಸಮಾನ

ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು ತರಲೆಂದು
ಕೈಲಾಸದಡಿಯಲಿ ಕುಳಿತು ಪ್ರಾರ್ಥಿಸಿದ ಪರಮ ದಯಾಳು ಪರೇಶನ
ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ ಓಮ್ ನಮ್ಃ ಶಿವಾಯಾ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಮ್
ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಮ್
ಸಖಲ ವೇಧವಿಧ ಭಕ್ತಾಗ್ರೇಸರ ರಾವಣನು ಸ್ತುತಿಸಿದ ಶಿವನನ್ನು
ಭಕ್ತರ ಭಕ್ತನು ಸರ್ವ ಶಕ್ತನ ಪರಶಿವನೊಲಿದನು ಕ್ಷಣದಲ್ಲಿ
ಲೋಕೈಕ ನಾಥ ಉದಾತ ಚರಿತನು ನೀಡಿದ ವರವನು ರಾವಣಗೆ
ಆತ್ಮ ಲಿಂಗವನೇ ಬೇಡಿದ ಭಕ್ತನ ಕೋರಿಕೆ ಸಲಿಸಿದ ಮುದದಿಂದ

ಪ್ರಳಯವೇ ಘಟಿಸುವುದೆನ್ನುತ ಭಯದಲಿ ಸುರಕುಲ ತತ್ತರಗೊಳ್ಳುತಿದೆ
ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕ್ಕೆ

ಸಂಧ್ಯೆ ಸಮೀಪಿಸೆ ಅರ್ಘ್ಯ ನೀಡಲು ರಾವಣಾ ಕಾತರಗೊಂಡಿರಲು
ಲಿಂಗವ ಧರೆಯಲಿ ಇರಿಸದಂಥ ಧರ್ಮ ಸಂಕಟವು ಕಾಡಿರಲು
ಸಮಯಕ್ಕೆ ಒದಗಿದ ಆ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲಿ
ಅಯ್ಯಾ ವಟುವೇ ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು
ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆ ಪಾಲೆಂದು
ಗಣಪತಿ ಅರುಹಿದ ಕಟ್ಟಳೆಯಾ
ರಾವಣ ತೂಗಿದ ತಲೆಯಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ

ಧಿಯೋಯೋನಃ ಪ್ರಚೋದಯಾತ್
ರಾವಣಾ
ಓಂ ಭೂರ್ಭುವಸ್ಸುವಃ ಓಂ ತತ್ಸವಿತುರ್ವರೇಣ್ಯಂ
ರಾವಣಾ
ಭರ್ಗೋದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್

ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ
ಬರಲಾಗದೆ ರಾವಣ ಮಿಡುಕಿದನು
ಲಿಂಗವು ಧರೆಯನು ಸೇರಿತು

ಓಡಿ ಬಂದು ವಟು ಮಾಡಿದ ಕಾರ್ಯಕ್ಕೆ ರೋಷಾವೇಷದಿ ಕುಟ್ಟಿದನು
ರಾವಣೇಶ್ವರನು ಗಣಪತಿ ಶಿರವನು ಮುಷ್ಟಿಯಿಂದ ತಾ ಗುದ್ದಿದನು
ಗಣಪತಿ ಮಾಡಿದ ಘನ ಕಾರ್ಯವನು ಲೋಕವೆಲ್ಲಾ ಕೊಂಡಾಡಿತು
ದೇವಲೋಕವೇ ಹೂ ಮಳೆಗರೆಯಿತು
ಹರುಷದ ಹೊನಲೆ ಹರಿಯಿತು

ಭಗ್ನ ಮನೋರತನಾಗಿ ರಾವಣನು ಭೂಗತ ಲಿಂಗವನ್ನೆತ್ತುತಿರೆ
ಸೋತು ಬಿಸುಟನು ದೆಸೆದೆಸೆಯಲ್ಲಿ ಹಸ್ತ್ರ ಸಂಪುಟಸಾರವನು

ಉಧ್ಬವಿಸಿತು ಒಡನೊಡನೆಯೆ ಅಲ್ಲಿ ಅದ್ಭುತ ಲಿಂಗಗಳೈದು
ಸಜ್ಜೇಶ್ವರ ಗುಣವಂಥೇಶ್ವರ ಮುರುಡೇಶ್ವರ ಧಾರೇಶ್ವರ ಮಹಾಬಲೇಶ್ವರ


*** Kannada Song Lyrics***

No comments:

Post a Comment

LinkWithin

Related Posts with Thumbnails
free counters