Savathi Narellu Song Lyrics

ಸವತಿಯ ನೆರಳು (1979) - ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಸಂಗೀತ:ಸತ್ಯಂ
ಗಾಯಕಿ:
ಎಸ್.ಜಾನಕಿ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಹೂವೊಂದು ಏಕೋ ಏನೋ ಬಲು ನೊಂದಿದೆ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಸುಮಪೂಜೆಯಲ್ಲಿ ಸೇರಿ ಹೊಸಬಾಳ ತೋರಲೂ
ಸುಮಪೂಜೆಯಲ್ಲಿ ಸೇರಿ ಹೊಸಬಾಳ ತೋರಲೂ

ಆ ದೈವ ಮೌನ ತಾಳೇ
ಆ ದೈವ ಮೌನ ತಾಳೇ
ಮನದ ಬಯಕೆ ಭ್ರಮೆಯಾ ಪಾಲೆ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ವನರಾಣಿ ತಾನೇ ಎಂದು ಮನಸಾರೆ ನಂಬಲೂ
ವನರಾಣಿ ತಾನೇ ಎಂದು ಮನಸಾರೆ ನಂಬಲೂ

ನೆರಳಾಗಿ ನೋವು ಬರಲೂ
ನೆರಳಾಗಿ ನೋವು ಬರಲೂ
ನಗುವಾ ನಲಿವಾ ದಿನವೂ ಎಂದೂ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ

ಬಿರುಗಾಳಿ ಬೀಸಿ ಬಂತು ಸುಖ ಶಾಂತಿ ನೀಗಿತು
ಕರುನಾಳು ಕಾಣೆ ದಾರಿ
ನಡೆಸು ಒಲವಾ ದಯವಾ ತೋರಿ

ಮಧುಮಾಸ ಬಂದಿದೆ ಮಧುವೆಲ್ಲಾ ತಂದಿದೆ
ಹೂವೊಂದು ಏಕೋ ಏನೋ ಬಲು ನೊಂದಿದೆ


*** Kannada Song Lyrics ***

No comments:

Post a Comment

LinkWithin

Related Posts with Thumbnails